ತಾಳಗುಂದ ರಾಮಣ್ಣ ಅನಂತರಾಮು (ಟಿ. ಆರ್. ಅನಂತರಾಮು) ಒಬ್ಬ ಭೂವಿಜ್ಞಾನಿ, ಸಂಶೋಧಕ, ಪರಿಶೋಧಕ, ಜನಪ್ರಿಯ ಅಂಕಣಕಾರ, ವಿಜ್ಞಾನ ಲೇಖಕ ಮತ್ತು ಸಂಪಾದಕ. ಇವರು ಅನೇಕ ಪತ್ರಿಕೆಗಳಲ್ಲಿ, ತಮ್ಮ ಅತ್ಯಂತ ವಿಚಾರಪೂರ್ಣ ಲೇಖನಗಳನ್ನು ಮಂಡಿಸಿದ್ದಾರೆ. ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ವಿವಿಧ ಮಾಧ್ಯಮಗಳ ಮೂಲಕ ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸದಲ್ಲಿ ಹಲವು ದಶಕಗಳಿಂದ ತೊಡಗಿದ್ದಾರೆ. ಭೂವಿಜ್ಞಾನದಂತಹ ವಿಷಯದಲ್ಲಿಯ ಸಂಗತಿಗಳನ್ನು ಜನಸಾಮಾನ್ಯರಿಗೂ ಮನಮುಟ್ಟುವಂತೆ ತಲುಪಿಸಿ ಅವರಲ್ಲಿ ಆಸಕ್ತಿಯನ್ನುಂಟು ಮಾಡಿದ ಕನ್ನಡ-ವಿಜ್ಞಾನ ಲೇಖಕರಾಗಿದ್ದಾರೆ. ಅವರು ವಿಜ್ಞಾನ ಪ್ರಸಾರ, ಗ್ರಂಥ ರಚನೆ ಹಾಗೂ ಗ್ರಂಥ ಸಂಪಾದನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. 'ವಿಸ್ಮಯ ವಿಜ್ಞಾನ ಮಾಲಿಕೆ,' ಯಲ್ಲಿ ಕೃತಿಗಳ ಸಂಪಾದನೆ, ಸಾಕ್ಷ್ಯಚಿತ್ರಗಳಿಗೆ ಸಾಹಿತ್ಯ, 'ಕನ್ನಡ ವಿಶ್ವಕೋಶ', 'ಜ್ಞಾನ-ವಿಜ್ಞಾನಕೋಶ', 'ಕಿರಿಯರ ಕರ್ನಾಟಕ', 'ಕರ್ನಾಟಕ ಸಂಗಾತಿ', 'ಕರ್ನಾಟಕ ಕೋಶ' ಮುಂತಾದ, 'ಪರಾಮರ್ಶನ ಗ್ರಂಥ' ಗಳಿಗೆ ಅವರು ಬರೆದಿರುವ ಲೇಖನ ಮುಂತಾದವುಗಳು ಅನಂತರಾಮುರವರನ್ನು ಕನ್ನಡ ವಿಜ್ಞಾನ ಸಾಹಿತ್ಯದ ಒಬ್ಬ ವಿಶಿಷ್ಠ ವ್ಯಕ್ತಿಯನ್ನಾಗಿಸಿವೆ. ನವಕರ್ನಾಟಕ ಪ್ರಕಟನಾ ಸಂಸ್ಥೆಯ 'ಪದ ವಿವರಣಾ ಕೋಶ’ ಮತ್ತು ’ಜ್ಞಾನ -ವಿಜ್ಞಾನ ಕೋಶ’ಗಳಲ್ಲಿ ಸಹಾಯಕ ಸಂಪಾದಕರಾಗಿ ಮಾಡಿದ ಕೆಲಸ ಮಹತ್ವದ್ದೆಂದು ಗುರುತಿಸಲ್ಪಟ್ಟಿದೆ. == ಪ್ರಾಥಮಿಕ ಜೀವನ == 'ಅನಂತರಾಮು' ಅವರು, ೦೩ ಆಗಸ್ಟ್ ೧೯೪೯ರಂದು, ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ, ತಾಳಗುಂದವೆಂಬ ಊರಿನಲ್ಲಿ ಜನಿಸಿದರು. ತಂದೆ ಶ್ರೀ ರಾಮಣ್ಣನವರು. ಸ್ವತಃ ಓದಿನಲ್ಲಿ ಅತ್ಯಂತ ಆಸಕ್ತರಾದ ತಾಯಿ ವೆಂಕಟಲಕ್ಷ್ಮಮ್ಮನವರು ಅನಂತರಾಮುರಿಗೆ ಬಾಲ್ಯದ ಆದರ್ಶವ್ಯಕ್ತಿಯಾಗಿದ್ದಾರೆ. ಸರ್ಕಾರಿ ಮಾಧ್ಯಮಿಕ ಶಾಲೆ ಹಾಗೂ ಮುನಿಸಿಪಲ್ ಹೈಸ್ಕೂಲ್ (೧೯೬೩-೧೯೬೬), ಶಿರಾದಲ್ಲಿ ಶಾಲಾಶಿಕ್ಷಣ ಮುಗಿಸಿದರು. ತುಮಕೂರು ಸರ್ಕಾರಿ ಕಾಲೇಜಿನಿಂದ (೧೯೬೬-೭೦) ಪದವಿ ಪಡೆದರು. ೧೯೭೨ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ (ಭೂವಿಜ್ಞಾನ) ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. == ವೃತ್ತಿ-ಜೀವನ == ೧೯೭೨ ರಿಂದ ೧೯೭೬ ರ ವರೆಗೆ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದ ಅಧ್ಯಾಪಕ. ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸ. ೧೯೭೭ ರಿಂದ ೨೦೦೮ವರೆಗೆ ಬೆಂಗಳೂರಿನ ಭಾರತೀಯ ಭೂ-ವೈಜ್ಞಾನ ಸರ್ವೇಕ್ಷಣ ಸಂಸ್ಥೆಯಲ್ಲಿ ಭೂ-ವಿಜ್ಞಾನಿ. ನಾಡಿನಾದ್ಯಂತ ಚಿನ್ನದ ನಿಕ್ಷೇಪಕ್ಕಾಗಿ ವ್ಯಾಪಕ ಶೋಧನೆ. ದುರ್ಗಮ ಕಾಡುಗಳ ಸಮೀಕ್ಷೆಗಳನ್ನು ನಡೆಸಿದರು. ಡಿಸೆಂಬರ್ ೨೦೦೮ರಲ್ಲಿ ವೃತ್ತಿಯಿಂದ ನಿವೃತ್ತರಾದರು. == ಸಾಹಿತ್ಯಕ ಚಟುವಟಿಕೆಗಳು: ಜನಪ್ರಿಯ ವಿಜ್ಞಾನ ಕ್ಷೇತ್ರ == ಕಳೆದ ೪೦ ವರ್ಷಗಳಿಂದ ವಿಜ್ಞಾನವನ್ನು ಜನಪ್ರಿಯಗೊಳಿಸಲು ನಾಡಿನ ವಿವಿಧ ಪತ್ರಿಕೆಗಳಲ್ಲಿ ೮೦೦ಕ್ಕೂ ಹೆಚ್ಚಿನ ಲೇಖನಗಳ ಪ್ರಕಟಣೆ. ಬೆಂಗಳೂರು ಆಕಾಶವಾಣಿಯಲ್ಲಿ ೧೯೭೨ರಿಂದಲೂ ವಿಜ್ಞಾನದ ಮುನ್ನಡೆಯೂ ಸೇರಿದಂತೆ ಭಾಷಣ, ಸಂದರ್ಶನ. ಬಹುತೇಕ ಕರ್ನಾಟಕದ ಎಲ್ಲ ಟಿ.ವಿ. ಚಾನೆಲ್‌ಗಳು ಇವರ ವೈಜ್ಞಾನಿಕ ಕಾರ್ಯಕ್ರಮಗಳನ್ನು ಪ್ರಸಾರಮಾಡಿವೆ. ’ಉದಯ ಟಿ.ವಿ’ಯು ರೂಪಿಸಿದ ’ಪರಿಚಯ ಕಾರ್ಯಕ್ರಮ’ ದಲ್ಲಿ ಸಂದರ್ಶನ 'ಈ ಟೀವಿ'ಯಲ್ಲಿ ಪ್ರಸಾರವಾದ ಶಿವರಾಮ ಕಾರಂತರ ವಿಜ್ಞಾನ ಸಾಹಿತ್ಯ ನಿರ್ಮಾಣ ಕುರಿತು ಸಂದರ್ಶನಗಳು. ’ಚಂದನ ವಾಹಿನಿ’ಯಲ್ಲಿ ವಿಜ್ಞಾನ ಕಾರ್ಯಕ್ರಮಗಳು-೧೦ ಪ್ರಧಾನ ಸಂಪಾದಕ : ಸುಭಾಷ್ ಪಬ್ಲಿಕೇಷನ್ಸ್ `ವಿಸ್ಮಯ ವಿಜ್ಞಾನ ಮಾಲಿಕೆ` - ೨೭ ಕೃತಿಗಳ ಸಂಪಾದನೆ ನವಕರ್ನಾಟಕ ಸಂಸ್ಥೆಯ ಪ್ರಕಟಣೆ `ಜ್ಞಾನ-ವಿಜ್ಞಾನ ಕೋಶ`ದ ಸಹಾಯಕ ಸಂಪಾದಕ ನವಕರ್ನಾಟಕ ಸಂಸ್ಥೆಯ `ವಿಜ್ಞಾನ ತಂತ್ರಜ್ಞಾನ ಪದ ಸಂಪದದ ಪರಿಷ್ಕತ ಆವೃತ್ತಿಯ (೨೦೧೧) ಸಂಪಾದಕರಲ್ಲೊಬ್ಬರು. `ನವಕರ್ನಾಟಕ ವಿಜ್ಞಾನ ತಂತ್ರಜ್ಞಾನ ನಿಘಂಟು’ ಸಂಪಾದಕರು ಕನ್ನಡ ವಿಶ್ವವಿದ್ಯಾಲಯ, ಹಂಪಿ ಪ್ರಕಟಿಸುತ್ತಿರುವ ` ವಿಜ್ಞಾನ ಸಂಗಾತಿ` ಮಾಸಪತ್ರಿಕೆಯ ಸಂಪಾದಕತ್ವ - ೨೦೦೨-೨೦೦೩ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯ `ವಿಜ್ಞಾನ ಲೋಕ ‘ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯ. ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಪ್ರಕಟಣೆ ` ಕಿರಿಯರ ಕರ್ನಾಟಕ` ಮತ್ತು `ಕರ್ನಾಟಕ ಕೋಶ`ಕ್ಕೆ ಲೇಖನಗಳು. ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯ, ನವದೆಹಲಿ ಮತ್ತು ಸಿ.ಎಸ್.ಐ.ಆರ್. ಸಂಸ್ಥೆಗೆ ವಿಜ್ಞಾನ ಪುಸ್ತಕಗಳ ಅನುವಾದಕ ಡಿ.ಎಸ್.ಇ.ಆರ್.ಟಿ. ಸಂಸ್ಥೆಗೆ ಶಿಲೆಗಳನ್ನು ಕುರಿತಂತೆ ಎರಡು ಸಾಕ್ಷ್ಯಚಿತ್ರ ಹಾಗೂ ಭೂವಿಜ್ಞಾನ ಕುರಿತಂತೆ ನಾಲ್ಕು ಚಿತ್ರಪಟ (ಚಾರ್ಟ್) ತಯಾರಿಕೆ. ತುಮಕೂರು ವಿಜ್ಞಾನ ಕೇಂದ್ರಕ್ಕೆ ಪರಿಸರ ಕುರಿತಂತೆ ೨೨ ಚಿತ್ರಪಟಗಳ ಅನುವಾದ. ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿರುವ `ಕನ್ನಡ ವಿಶ್ವಕೋಶ` ಕ್ಕೆ ಭೂವಿಜ್ಞಾನ ಕುರಿತಂತೆ ಲೇಖನಗಳು. ಕರ್ನಾಟಕ ರಾಜ್ಯ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯ ಮುಖಪತ್ರಿಕೆ `ವಿಜ್ಞಾನ ಲೋಕ’ ದ ಸಂಪಾದಕ ವರ್ಗದ ಸದಸ್ಯ ಕುವೆಂಪು ಭಾ಼ಷಾ ಭಾರತಿ ಪ್ರಾಧಿಕಾರ ಪ್ರಕಟಿಸಿರುವ ಜೆ.ಡಿ. ಬರ್ನಾಲ್‌ರವರ ` ಇತಿಹಾಸದಲ್ಲಿ ವಿಜ್ಞಾನ’ ಅನುವಾದ ಕೃತಿಗಳ (ನಾಲ್ಕು ಸಂಪುಟಗಳು) ಸಂಪಾದಕರು. (೨೦೧೨) ಪ್ರಜಾವಾಣಿ ಪತ್ರಿಕೆಯಲ್ಲಿ `ವಿಸ್ಮಯ ಜಗತ್ತು’ ಕಿರು ಅಂಕಣಕ್ಕೆ ೨೦೧೨-೧೩ (೭೭೦ ಕಿರು ಮಾಹಿತಿ) ಕಸ್ತೂರಿ ಮಾಸಪತ್ರಿಕೆಯಲ್ಲಿ ಅಂಕಣ ‘ಜ್ಞಾನ ವಿಜ್ಞಾನ’ ಮಾರ್ಚ್, ೨೦೧೪ ರಿಂದ ಇಂದಿಗೂ ಮುಂದುವರಿದಿದೆ. ಕನ್ನಡ ಸಾಹಿತ್ಯ ಪರಿಷತ್ತು ಯೋಜಿಸಿರುವ `ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ’ಯ ಭಾಗವಾಗಿ `ವಿಜ್ಞಾನ-ತಂತ್ರಜ್ಞಾನ ಸಂಪುಟದ ಸಂಪಾದಕ, ೨೦೧೫ `ಡಿಜಿಟಲ್ ಕನ್ನಡ’ ಇ-ಪತ್ರಿಕೆಗೆ ವಿಜ್ಞಾನದ ಅಂಕಣ `ಸೈನ್ಸ್ ಸ್ಕೋಪ್’– ೨೦೧೬ರ ಫೆಬ್ರವರಿಯಿಂದ. ಉದಯಭಾನು ಕಲಾಸಂಘ ಪ್ರಕಟಿಸಿರುವ `ಬೆಂಗಳೂರು ದರ್ಶನ’ಕ್ಕೆ ಮೂರು ಲೇಖನಗಳು ೨೦೧೬ (ಪರಿಷ್ಕೃತ ಆವೃತ್ತಿ). ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿರುವ ೨೦೦೩ ’ಕರ್ನಾಟಕ ಸಂಗಾತಿ’, ಪರಾಮರ್ಶನ ಗ್ರಂಥಕ್ಕೆ ಕರ್ನಾಟಕ ಭೂ ವಿಜ್ಞಾನ’ ಕುರಿತಂತೆ ಆಕರ ಲೇಖನ. ’ಹಂಪಿ ಕನ್ನಡ ವಿಶ್ವವಿದ್ಯಾಲಯ’ ಪ್ರಕಟಣೆ ’ಕಿರಿಯರ ಕರ್ನಾಟಕ’ ಮತ್ತು ’ಕರ್ನಾಟಕ ಕೋಶ’ ಕ್ಕೆ ಲೇಖನಗಳು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪ್ರಕಟಣೆ, ’ಬಾಲ ವಿಜ್ಞಾನ ಮಾಸಪತ್ರಿಕೆ’ ಯ ಸಂಪಾದಕ ಮಂಡಳಿಯ ಸದಸ್ಯ. ಮೈಸೂರಿನಲ್ಲಿರುವ, ಭಾರತೀಯ ಭಾಷಾ ವಿಜ್ಞಾನ ಕೇಂದ್ರ '()' ಕುರಿತು ನಿರ್ಮಿಸುತ್ತಿರುವ ಕರ್ನಾಟಕ ಕುರಿತ ’ಭಾಷಾ ಮಂದಾಕಿನಿ’ ಸರಣಿಗೆ, ಕರ್ನಾಟಕ ಭೂ-ವೈಜ್ಞಾನಿಕ ಅದ್ಭುತಗಳನ್ನು ಕುರಿತಂತೆ ೨ ಕಂತುಗಳ ಸಾಕ್ಷ್ಯಚಿತ್ರಗಳಿಗೆ ಭೂ-ವೈಜ್ಞಾನಿಕ ಸಾಹಿತ್ಯ ರಚನೆ. ’ಬೆಂಗಳೂರಿನ ಕನ್ನಡ ಗಣಕ ಪರಿಷತ್ತು’ ಅಭಿವೃದ್ಧಿಪಡಿಸಿದ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವ ಕೋಶದ ಸೀಡಿ ('') ಆವೃತ್ತಿಯ ವಿಜ್ಞಾನ ವಿಭಾಗಕ್ಕೆ ಪ್ರಧಾನ ಸಂಪಾದಕ. ’ಅಂತಾರಾಷ್ಟ್ರೀಯ ಭೂಗ್ರಹ ವರ್ಷಾಚರಣೆ’ ಅಂಗವಾಗಿ ೮-೯ ರಲ್ಲಿ ರಾಜ್ಯದಾದ್ಯಂತ ’ಉಪನ್ಯಾಸ’. ’ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಮಾರ್ಗದರ್ಶನ ಮತ್ತು ಉಪನ್ಯಾಸ. == ಟಿ ಆರ್. ಅನಂತರಾಮುರವರ ಪ್ರಕಟಿತ ಕೃತಿಗಳು == ಕನ್ನಡ ವಿಜ್ಞಾನ ಸಾಹಿತ್ಯ ಪ್ರಕಟಣೆಗಳು === ಸ್ವಂತ ರಚನೆಗಳು === === ಅನುವಾದಿತ ಕೃತಿಗಳು === === ಸಂಪಾದಿತ ಕೃತಿಗಳು === === ಇತರರೊಡನೆ ಸಂಪಾದಿತ ಕೃತಿಗಳು === === ಮಕ್ಕಳ ಸಾಹಿತ್ಯಕ್ಕೆ ಕೊಡುಗೆ (ಪ್ರಧಾನ ಸಂಪಾದಕ) === == ವೃತ್ತಿಜೀವನದ ಕೊಡುಗೆಗಳು == ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯಲ್ಲಿ ಹಿರಿಯ ವೈಜ್ಞಾನಿಯಾಗಿ ಟಿ. ಆರ್. ಅನಂತರಾಮುರ ಕೊಡುಗೆ ಬಹಳ ಮಹತ್ವದ್ದಾಗಿದೆ. 'ಕೋಲಾರ ಗೋಲ್ಡ್ ಫೀಲ್ಡ್ಸ್,’ ನ ಗಣಿಯೊಳಗೆ ೩ ಕಿ.ಮೀಟರ್ ಗೂ ಹೆಚ್ಚಿನ ಆಳದ ಪರಿಸರಕ್ಕೆ ಇಳಿದುಹೋಗಿ, ೬೯ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ, ಸಂಶೋಧನಾ ಕೆಲಸಗಳನ್ನು ಕೈಗೊಂಡಿದ್ದಾರೆ. ಉತ್ತರಭಾರತದ ’ಮೇಘಾಲಯ ರಾಜ್ಯ’ ದ ಬೆಟ್ಟ-ಕಣಿವೆಗಳಲ್ಲಿಯೂ-ನಿಕ್ಷೇಪಗಳನ್ನು ಶೋಧಿಸುವ ಕೆಲಸದಲ್ಲಿ ಯಶನ್ನು ಪಡೆದಿದ್ದಾರೆ. ದಕ್ಷಿಣ ಭಾರತದ ’ಮಲೆಮಹದೇಶ್ವರ’ ಬೆಟ್ಟಗಳ ಪ್ರದೆಶದಲ್ಲಿ ೨,೫೦೦ ಚ. ಕಿಲೋಮೀಟರ್ ವಿಸ್ತೀರ್ಣದ ದುರ್ಗಮಕಾಡುಗಳ-ಭೂಪ್ರದೇಶದಲ್ಲಿ, ಸಂಚರಿಸಿ, ಅಲ್ಲಿಯೇ ಶಿಬಿರವನ್ನು ಹೂಡಿ, ಅಲ್ಲಿನ ಶಿಲಾನಿಕ್ಷೇಪಗಳ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ. ಇಂತಹ ನಕ್ಷೆಯನ್ನು ಸಿದ್ಧಪಡಿಸಿದವರಲ್ಲಿ ಮೊದಲಿಗರು. ಜಿಲ್ಲಾಮಟ್ಟದಲ್ಲಿ ಸರ್ವ ಸಮಸ್ತ ಸಂಪಮ್ಮೂಲಗಳನ್ನೂ ನೀರು, ಮಣ್ಣು ಅರಣ್ಯ, ಕೈಗಾರಿಕಾ ಕಚ್ಚಾವಸ್ತುಗಳು, ಖನಿಜ ನಿಕ್ಷೇಪಗಳು, ಇತ್ಯಾದಿಗಳನ್ನು ಒಳಗೊಂಡ ಮಹತ್ವ ’ಜಿಲ್ಲಾ ಸಂಪಮ್ಮೂಲ ನಕ್ಷೆ,’ ಯನ್ನು ಸಿದ್ಧಪಡಿಸುವ ಪರಿಪಾಠವನ್ನು ಅವರು ಜಾರಿಗೆ ತಂದಿದ್ದಾರೆ. == ಕೆಲ ಉಲ್ಲೇಖಾರ್ಹ ಸಂಗತಿಗಳು == ’ಭೂವೈಜ್ಞಾನಿಕ ಸರ್ವೆಕ್ಷನ ಸಂಸ್ಥೆ’ ಯ ೧೫೦ ನೇ ವರ್ಷಾಚರಣೆ’ ಯ ಸಂದರ್ಭದಲ್ಲಿ ಅ ಸಂಪಾದಿಸಿದ " ನ್ಯಾಶನಲ್ ಜಿಯೊಲಾಜಿಕಲ್ ಮಾನ್ಯುಮೆಂಟ್ಸ್," ಅತಿ ವಿಶಿಷ್ಠವಾದ, ಹಾಗೂ ಅತ್ಯಂತ ಮಹತ್ವದ ಕೃತಿಯಾಗಿದೆಯೆಂಬುದು ಕೃತಿ-ವಿಮರ್ಶಕರ ಅಂಬೋಣ. ಈ ಕೃತಿ, ಬಹಳ ಕಾಲದವರೆಗೆ ಎಲ್ಲರ ಸಂಶೋಧನೆಗಳಿಗೆ ನೆರವಾಗುವ ಉಲ್ಲೇಖಗಳಾಗುವ ಕೃತಿಯಾಗಿದೆ. ಕರ್ನಾಟಕದ ಮರಡಿಹಳ್ಳಿಯಲ್ಲಿರುವ ದಿಂಬುಲಾವ, ಬೆಂಗಳೂರಿನ ಲಾಲ್ ಬಾಗ್ ನ, ಶಿಲಾಬೆಟ್ಟ, ಸೆಂಟ್ ಮೇರಿ ದ್ವೀಪದ, ಶಿಲಾಕಂಬಗಳು, ಕೆ.ಜಿ.ಎಫ್ ನಲ್ಲಿರುವ ಜ್ವಾಲಾಮುಖಿಯ ಕಲ್ಲುಗಳ ರಾಶಿಗಳಬಗ್ಗೆ ಮಾಡಿದ ಅಧ್ಯಯನದ ತಥ್ಯಗಳನ್ನು ತಮ್ಮ ಕೃತಿ ಪಟ್ಟಿಯಲ್ಲಿ ಸೇರಿಸಿದ್ದಾರೆ. ಅಂಕಣಕಾರ ಡಾ. ಎಚ್. ಆರ್. ಕೃಷ್ಣಮೂರ್ತಿಯವರ ಬರೆದಿರುವಂತೆ ಅನಂತರಾಮುರವರು ಕನ್ನಡದ ಜನಪ್ರಿಯ ವಿಜ್ಞಾನ ಪತ್ರಿಕೆಯ ಹೇಗಿರಬೇಕೆಂಬ ’ಬೆಂಚ್ ಮಾರ್ಕ್’ನ್ನು ’ವಿಜ್ಞಾನ ಸಂಗಾತಿ’ಯ ಮೂಲಕ ಮಾಡಿ ತೋರಿಸಿಕೊಟ್ಟಿದ್ದಾರೆ. ’ಟಿ. ಆರ್. ಅನಂತರಾಮು’ ರವರ ವಿದ್ವತ್ತನ್ನು ಕಂಡುಹಿಡಿದ ವ್ಯಕ್ತಿಗಳಲ್ಲಿ ಜಿ. ಟಿ.ನಾರಾಯಣರಾಯರು ಮೊದಲಿಗರು. ಅನಂತರಾಮು ಹಾಗೂ ನಾಗೇಶ ಹೆಗಡೆಯವರ ಸಂಪಾದಕತ್ವದಲ್ಲಿ ಹಂಪಿ ವಿಶ್ವವಿದ್ಯಾ ಲಯದಿಂದ ಹತ್ತು ಸಂಚಿಕೆಗಳು ಒಂದು ಶ್ರೇಷ್ಠಮಾದರಿ ಕನ್ನಡ ಕಾವ್ಯಲೋಕದ ಕಾವ್ಯ-ಸಂಪತ್ತಾಗಿ ಉಳಿಯುತ್ತವೆ. == ಪ್ರಶಸ್ತಿ ಮತ್ತು ಗೌರವಗಳು == `ಭೂಕಂಪನಗಳು` ಕೃತಿಗೆ ಆರ್ಯಭಟ ಪ್ರಶಸ್ತಿ. - ೧೯೯೪ `ಕಾಲಗರ್ಭಕ್ಕೆ ಕೀಲಿಕೈ` ಕೃತಿಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿ-೨೦೦೬ ವಿಜ್ಞಾನ ಸಾಹಿತ್ಯದ ಕೊಡುಗೆಗಾಗಿ - ಮೌಲ್ಯ ಗೌರವ ಪ್ರಶಸ್ತಿ. ಮೂಡಬಿದರೆ, ದ.ಕ. - ೨೦೦೬ ಕರ್ನಾಟಕ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ೨೦೦೮ರ `ಪರಿಸರ ಪತ್ರಿಕೋದ್ಯಮ ಪ್ರಶಸ್ತಿ’. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ `ವಿಷನ್ ಗ್ರೂಪ್’ಇಂದ `ಶ್ರೇಷ್ಠ ವಿಜ್ಞಾನ ಸಂವಹನಕಾರ’ ಪ್ರಶಸ್ತಿ-೨೦೧೧ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ `ಶ್ರೇಷ್ಠ ಲೇಖಕ ಪ್ರಶಸ್ತಿ’ (೨೦೧೨-೧೩). ಕೃತಿ:`ದೈತ್ಯ ಪ್ರತಿಭೆಗಳ ಹೆಗಲ ಮೇಲೆ’ ಕರ್ನಾಟಕ ಸರ್ಕಾರದ `ಕುವೆಂಪು ಭಾಷಾ ಭಾರತಿ ಪ್ರಾಧಿಕಾರ’ದ ಅನುವಾದ ಪುರಸ್ಕಾರ, ೨೦೧೧ (ಕೃತಿ `ರಾಕೆಟ್’) ಜನಪ್ರಿಯ ವಿಜ್ಞಾನ ಸಾಹಿತ್ಯಕ್ಕೆ ಕೊಡುಗೆಯನ್ನು ಪರಿಗಣಿಸಿ 'ಗೌರವ ಡಾಕ್ಟರೇಟ್'- ತುಮಕೂರು ವಿಶ್ವವಿದ್ಯಾಲಯ, ತುಮಕೂರು, ೨೦೧೫ ಶಿವಮೊಗ್ಗ ಕರ್ನಾಟಕ ಸಂಘದಿಂದ ಜೀವಮಾನ ಸಾಧನೆಗಾಗಿ `ಡಾ. ಶಿವರಾಮ ಕಾರಂತ ವಿಜ್ಞಾನ ಪ್ರಶಸ್ತಿ’ – ೨೦೧೭ ವಿ.ಸಿ. ಸಂಪದದಿಂದ ಜೀವಮಾನ ಸಾಧನೆಗಾಗಿ ಗೌರವಾರ್ಪಣೆ - ೨೦೧೮ ವಿಜ್ಞಾನ ಶಿಕ್ಷಕರಿಗೆ, ಸಂವಹಕರಿಗೆ ಕರ್ನಾಟಕ ಸರ್ಕಾರದ ವಾರ್ಷಿಕ ಪ್ರಶಸ್ತಿ === ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪುಸ್ತಕ ಪುರಸ್ಕಾರ === ೧೯೮೫ರ ಅತ್ಯುತ್ತಮ ವಿಜ್ಞಾನ ಕೃತಿ - `ಹಿಮದ ಸಾಮ್ರಾಜ್ಯದಲ್ಲಿ` ೨೦೦೩ರ ಅತ್ತುತ್ತಮ ವಿಜ್ಞಾನ ಕೃತಿ - `ಕರ್ತಾರನಿಗೊಂದು ಕಿವಿಮಾತು' ೨೦೦೮ರ ಅತ್ಯುತ್ತಮ ಪ್ರವಾಸ ಸಾಹಿತ್ಯ ಕೃತಿ - `ಪಶ್ವಿಮ ಮುಖಿ’ === ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ವಿಜ್ಞಾನ ಗೋಷ್ಠಿಯ ಅಧ್ಯಕ್ಷತೆ === ಅಖಿಲ ಭಾರತ ೭೩ನೇ ಕನ್ನಡ ಸಾಹಿತ್ಯ ಸಮ್ಮೇಳನ – ವಿಜ್ಞಾನ ಗೋಷ್ಠಿಯ ಅಧ್ಯಕ್ಷತೆ, ಶಿವಮೊಗ್ಗ, ೨೦೦೬ ಅಖಿಲ ಭಾರತ ೮೧ನೇ ಸಾಹಿತ್ಯ ಸಮ್ಮೇಳನ – ವಿಜ್ಞಾನ ಗೋಷ್ಠಿಯ ಅಧ್ಯಕ್ಷತೆ, ಮಡಿಕೇರಿ, ಕೊಡಗು, ೨೦೧೪ ೩ನೇ ಸಿರಾ ತಾಲ್ಲೂಕು ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ, ಸಿರಾ, ೨೦೧೫ == ಡಾ. ಟಿ.ಆರ್.ಎ.ವಿಜ್ಞಾನ ಪ್ರತಿಶ್ಠಾನ ಸ್ಥಾಪನೆ == ಡಾ.ಟಿ.ಆರ್.ಅನಂತರಾಮುರವರು, ವಿಜ್ಞಾನ ಪ್ರತಿಷ್ಠಾನವನ್ನು ೧೨ ಜನವರಿ ೨೦೨೧ ರಂದು ಔಪಚಾರಿಕವಾಗಿ ನೋಂದಾಯಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಉದ್ದೇಶದಿಂದ ೭೦ ರ ದಶಕದ ಆರಂಭದಿಂದಲೂ ವಿಜ್ಞಾನವನ್ನು ಜನಪ್ರಿಯಗೊಳಿಸುವತ್ತ ಅವರ ಕೊಡುಗೆಯು ಈ ಲಾಭೋದ್ದೇಶವಿಲ್ಲದ ಉಪಕ್ರಮಕ್ಕೆ ಪ್ರೇರಕ ಶಕ್ತಿಯಾಗಿದೆ. ಅವರ ವಿಚಾರಧಾರೆಗಳನ್ನು ಈ ಟ್ರಸ್ಟ್ ನ ಮೂಲಕ ಕರ್ನಾಟಕದ ಮೂಲೆ ಮೂಲೆಯನ್ನು ತಲುಪಲು ಯೋಜನೆಗಳನ್ನು ಹೆಚ್ಚಿಸುವ ಆಶಯವನ್ನು ಹೊಂದಲಾಗಿದೆ. == ಅನಂತರಾಮುರವರ ಕುಟುಂಬ ಮತ್ತು ವಿಳಾಸ == ಪತ್ನಿ ಅನ್ನಪೂರ್ಣರವರು, ಕರಡುಪ್ರತಿಗಳನ್ನು ತಿದ್ದುವುದರಿಂದ ಹಿಡಿದು, ಅದಕ್ಕೆ ಅಂತಿಮ ಮೆರುಗನ್ನು ಕೊಡುವವರೆಗೂ ಅತ್ಯಂತ ಕಾಳಜಿ ಶ್ರದ್ಧೆಗಳಿಂದ ಪತಿಯ ಜೊತೆ ಸಹಕರಿಸುತ್ತಿದ್ದಾರೆ. ಮಗ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಇಂಜಿನಿಯರ್. ಮಗಳು ’ಸ್ಪೇನ್ ದೇಶ’ದಲ್ಲಿ ನೆಲೆಸಿದ್ದಾರೆ. ಮೊಮ್ಮಕ್ಕಳು ’ಅಮೋಘ್’ ಮತ್ತು ´ಅನನ್ಯ´. ವಿಳಾಸ: ೫೩೪, ’ಧಾತ್ರಿ,’ ೭೦ ನೇ ಅಡ್ಡ ರಸ್ತೆ, ೧೪ ನೇ ಮುಖ್ಯ ರಸ್ತೆ, ಕುಮಾರಸ್ವಾಮಿ ಬಡಾವಣೆ, ೧ ನೇ ಹಂತ, ಬೆಂಗಳೂರು-೫೬೦೦೭೮. ದೂರವಾಣಿ : ೨೬೬೬೪೨೦೪/೯೮೮೬೩೫೬೦೮೫ == ಉಲ್ಲೇಖಗಳು == == ಹೊರಸಂಪರ್ಕಕೊಂಡಿಗಳು == ಟಿ. ಆರ್. ಅನಂತರಾಮು ವಿಜ್ಞಾನ ಪ್ರತಿಷ್ಟಾನ ಸ್ಥಾಪನೆ ಟಿ. ಆರ್. ಅನಂತರಾಮು = ಕಣಜ ಅಂತರಜಾಲ ಕನ್ನಡ ಜ್ಞಾನಕೋಶ